Mothers Day Gifts

2025 ಕನ್ನಡದಲ್ಲಿ ತಾಯಂದಿರ ದಿನದ ಶುಭಾಶಯಗಳು | Happy Mother’s Day Wishes, Quotes, Messages in Kannada

May 9, 2025

Mother’s Day Wishes Kannada: ಅಮ್ಮಂದಿರ ದಿನದ ಶುಭಾಶಯಗಳು

ಅಮ್ಮ ಎಂದರೆ ಏನೋ ಹರುಷವು…

ಶ್ರೀ ಪಿ ಬಿ ಶ್ರೀನಿವಾಸ್ ಹಾಗು ಶ್ರೀ ಕೃಷ್ಣಮೂರ್ತಿ ಅವರ ಸುಮಧುರ ಕಂಠದಲ್ಲಿ, ಡಾ. ವಿಷ್ಣುವರ್ಧನ್ ಹಾಗು ಡಾ. ದ್ವಾರಕೀಶ್ ನಟನೆಯ ಈ ಹಾಡನ್ನು ಕೇಳುತ್ತಿದ್ದರೆ, ಒಂದು ಕ್ಷಣ ನಾವು ನಮ್ಮ ವಾಸ್ತವ ಜಗತ್ತನ್ನು ಮೀರಿ, ಅಮ್ಮನ ಪ್ರೀತಿಯ ಸಾಗರದ ನೆನಪುಗಳ ಅಲೆಯಲ್ಲಿ ತೇಲಾಡುತ್ತಿರುತ್ತೇವೆ.

ಅಮ್ಮ; ಇದು ಖಂಡಿತ ಒಂದು ಶಬ್ದವಲ್ಲ. ಬದಲಿಗೆ ಅದೊಂದು ಭಾವನೆ. ಸಂತೋಷ, ಸುಖ, ದುಃಖ, ನೋವು, ನಲಿವು ಹೀಗೆ ಎಲ್ಲದಕ್ಕೆ ಅಮ್ಮನೇ ಆಧಾರ. ಆಕೆಯೇ ನಮ್ಮ ಮೊದಲ ನುಡಿ. ಜಗತ್ತಿನಲ್ಲಿ ಅಮ್ಮ ಅನ್ನುವ ಶಬ್ದಕ್ಕಿಂತ ತೂಕದ ಇನ್ನೊಂದು ಶಬ್ದ-ಭಾವನೆ ಇರಲಿಕ್ಕಿಲ್ಲ.

ಪ್ರತಿ ವ್ಯಕ್ತಿಯ ಬದುಕಿನಲ್ಲಿ ಅಮ್ಮನ ಮನೆಯಷ್ಟು ಆಪ್ತ ಮನೆ ಇನ್ನೊಂದು ಸಿಗಲಾರದು. ಅಮ್ಮನ ಸೆರಗು ನೀಡುವ ಸುಖವನ್ನು ಜಗತ್ತಿನ ಯಾವುದೇ ವಸ್ತು ನೀಡಲಾರದು. ಅಮ್ಮನಿಗೆ ಸರಿ ಸಾಟಿ ಅಮ್ಮನೇ. ಅದಕ್ಕಾಗಿಯೇ ಅಮ್ಮನನ್ನು ನಮ್ಮಲ್ಲಿ ಮಾತೃ ದೇವತೆ ಎಂದೇ ಪೂಜಿಸುತ್ತಾರೆ. ಅಮ್ಮ ಅನ್ನುವುದು ಒಂದು ವ್ಯಕ್ತಿ ಅಲ್ಲ; ಅಮ್ಮ ಅನ್ನುವುದು ಕೇವಲ ಎರಡು ಪದಗಳಲ್ಲ; ಬದಲಿಗೆ ಅಮ್ಮ ಎಂದರೆ ಒಂದು ಸುಂದರ ಭಾವನೆ. ಅದು ಕೊಡುವ ಸಂತೃಪ್ತಿಯನ್ನು ಅಮ್ಮನ ಪ್ರೀತಿ ಪಡೆದವರಷ್ಟೇ ತಿಳಿಯಬಲ್ಲರು. ಅದನ್ನು ಶಬ್ದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ.

ಆದದಕ್ಕೂ, ಈ ಮಾತೃಭಾವವನ್ನು ಅನಾವರಣಗೊಳಿಸಲು ನೀವು Mother’s Day captions in Kannada ಹುಡುಕುತ್ತಿರುವರೆಂದರೆ, ಈ ಭಾವನೆಗಳಿಗೆ ಜೀವ ನೀಡುವ ಪದಗಳನ್ನು ಇಲ್ಲಿ ಕಾಣಬಹುದು.

Mother’s Day wishes Kannada text | ಅಮ್ಮಂದಿರ ದಿನದ ಶುಭಾಶಯಗಳಿಗೆ ಅಕ್ಷರ ರೂಪ

ನಿಮ್ಮ ಅಮ್ಮ ನಿಮ್ಮ ಜೀವನ. ಅಮ್ಮನ ಹೊರತಾದ ಜಗತ್ತನ್ನು ಕಲ್ಪಿಸಲು ನಮಗೆ ಸಾಧ್ಯವಿಲ್ಲ. ನಮ್ಮನ್ನು ಸದಾ ಬೆಚ್ಚನೆಯ ಭಾವದಿಂದ ಪೊರೆಯುವ ಅಮ್ಮಂದಿರಿಗೆ ಅಮ್ಮಂದಿರ ದಿನದಂದು Kannada Mother’s Day SMS ಮೂಲಕ ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಿ

  • ಅಮ್ಮ ಎನ್ನುವ ಬೆಚ್ಚಗಿನ ಭಾವ: ಆ ಭಾವದಷ್ಟು ಅದ್ಭುತ ಸಂಗತಿ ಇನ್ನೊಂದಿಲ್ಲ
  • ಅಮ್ಮ: ಇದು ಬರಿ ಒಂದು ಶಬ್ದವಲ್ಲ; ಲೆಕ್ಕಕ್ಕೆ ಸಿಗದ ಒಂದು ಭಾವನೆ. ಅಮ್ಮನಿಗೆ ನಮ್ಮ ಪ್ರೀತಿ ತೋರಿಸಲೊಂದು ಅಮೂಲ್ಯ ದಿನ ಇಂದು
  • ಅಮ್ಮ ಅನ್ನುವ ಹೆಸರೇ ಎಲ್ಲರ ಎದೆಯಲೊಂದು ವಿಶಿಷ್ಟ ಭಾವ ಮೂಡಿಸುತ್ತದೆ.
    ಆ ಬೆಚ್ಚಗಿನ ಭಾವಕ್ಕೆ ಹೆಸರಿಲ್ಲ; ಅದಕ್ಕೆ ಹೆಸರಿಟ್ಟು ಕರೆಯಲು ಸಾಧ್ಯವಿಲ್ಲ. ಎಲ್ಲಾ
    ಭಾವನೆಗಳಿಗೂ ಮೂರ್ತ ರೂಪ ನೀಡುವಂತದ್ದು ಆ ಪದ.

  • ಅಮ್ಮ ಎಂದರೆ ಏನು? ಅದು ಶ್ರೀ ಕೃಷ್ಣ ಪರಮಾತ್ಮನ ವಿಶ್ವರೂಪದಂತೆ.
    ಅಲ್ಲಿ ಎಲ್ಲವೂ ಇದೆ; ಎಲ್ಲೆಡೆಯೂ ಇರುವುದು ಅಮ್ಮನೇ.
    ಇಂತಹ ಅಮ್ಮನ ಋಣ ನೆನಪಿಸಿಕೊಳ್ಳಲೊಂದು ದಿನ
    ವಿಶ್ವ ಅಮ್ಮಂದಿರ ದಿನ.
  • ಅಮ್ಮ; ಐ ಲವ್ ಯು
    ನನ್ನ ಪಾಲಿಗೆ ನೀನೆ ಎಲ್ಲಾವೂ
  • ಪ್ರತಿ ದಿನವೂ ಅಮ್ಮಂದಿರ ದಿನವೇ. ಆದರೆ ಅಮ್ಮಂದಿರ ದಿನ ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸಲೊಂದು ಅವಕಾಶ. ಆಕೆಯ ಪ್ರೀತಿಯನ್ನು ಮತ್ತೊಮ್ಮೆ ಧ್ಯಾನಿಸುವ ಕ್ಷಣವದು.
  • ಆಗಸದಷ್ಟು ವಿಸ್ತಾರ
    ಸಾಗರದಷ್ಟು ಆಳ
    ನಕ್ಷತ್ರ ಲೋಕದಂತೆ ಲೆಕ್ಕಕ್ಕೆ ಸಿಗದ ಗಣಿತ
    ಇದಕ್ಕೆ ಇನ್ನೊಂದು ಹೆಸರು ಅಮ್ಮನ ಪ್ರೀತಿ

Mother’s Day quotes for Amma in Kannada | ಅಮ್ಮನಿಗೆ ನೀವು ಹೀಗೆ ಅಮ್ಮಂದಿರ ದಿನದ ಶುಭಾಶಯಗಳನ್ನು ಕೋರಿ

ಅಮ್ಮನ ಪ್ರೀತಿಯನ್ನು ಶಬ್ದಗಳಲ್ಲಿ ಹಿಡಿದುಕೊಳ್ಳಲು, ವ್ಯಕ್ತ ಪಡಿಸಲು ಅಸಾಧ್ಯ. ಆದರೂ, ನಮ್ಮ ಪ್ರೀತಿಯನ್ನು ಅಮ್ಮನಿಗೆ ತಿಳಿಸುವ Kannada Mother’s Day Shayari ಇಲ್ಲಿವೆ.

  • ಅಮ್ಮ;
    ಈ ಎರಡಕ್ಷರದ ಪದ..
    ಆದರೆ ಆ ಪದದ ತೂಕವನ್ನು ಅಳೆಯಲು ಅಸಾಧ್ಯ
    ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು
  • ಅಮ್ಮನೆಂದರೆ ಆಕಾಶ
    ಅಮ್ಮನ ಪ್ರೀತಿಯೆಂದರೆ ಅದರ ವಿಸ್ತಾರ
    ಅಮ್ಮನ ನೆನಪೆಂದರೆ ಅಲ್ಲಿರುವ ನಕ್ಷತ್ರಗಳು
    ಅಮ್ಮ ಅಂದರೆ ಅನಂತ
    ಪ್ರತಿದಿನ ಅಮ್ಮನ ದಿನವೇ

  • ನೋವು ನಲಿವು ಸೋಲು ಗೆಲುವು
    ಎಲ್ಲದಕ್ಕೂ ಒಂದೇ ಭಾವ-ಭಾವನೆ
    ಅಮ್ಮ.. ಈ ಶಬ್ದವೇ ಸಾಕು
    ಬದುಕನ್ನು ಬೆಳಗಿಸಲು
    ಅಮ್ಮಂದಿರ ದಿನದ ಶುಭಾಶಯಗಳು
  • ಅಮ್ಮನ ಪ್ರೀತಿ
    ಅಮ್ಮನ ಕೈತುತ್ತು
    ಅಮ್ಮನ ನಿಸ್ವಾರ್ಥ ಕಾಳಜಿ
    ಇವುಗಳ ಮುಂದೆ ಸಮಾನನಾದ ಇನ್ನೊಂದು ವಸ್ತುವಿರಲಾರದು
    ಅಮ್ಮ ಐ ಲವ್ ಯು
  • ಅಮ್ಮಂದಿರ ದಿನ
    ಅದು ನಿತ್ಯೋತ್ಸವ
    ಅಮ್ಮ ಅನ್ನುವ ಭಾವನೆಯೇ
    ಬದುಕ ಉಸಿರಾಟ
  • ಶಬ್ದಗಳಲ್ಲಿ ಕಟ್ಟಿ ಕೊಡಲಾರದ ಭಾವನೆ
    ಪದಗಳಲ್ಲಿ ವರ್ಣಿಸಲಾಗದ ವ್ಯಕ್ತಿತ್ವ
    ತನ್ನ ಸೋಲುಗಳಲ್ಲೇ ಮಕ್ಕಳ ಗೆಲುವು ಕಾಣುವ ನಿಷ್ಕಳಂಕ ವ್ಯಕ್ತಿತ್ವ
    ಅಮ್ಮ; ನಿಮಗೆಅಮ್ಮಂದಿರ ದಿನದ ಶುಭಾಶಯಗಳು
  • ಅಮ್ಮ ಅಂದರೆ
    ಪ್ರೀತಿ
    ತ್ಯಾಗ
    ತಾಳ್ಮೆ
    ಹುಸಿಕೋಪ
    ನಿಸ್ವಾರ್ಥತೆ
    ಇವೆಲ್ಲವೂ ಮೇಳೈಸಿದ ಏಕೈಕ ವ್ಯಕ್ತಿತ್ವ
    ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು
  • ಹೆತ್ತು ಹೊತ್ತು ಸಲಹಿದ ದೇವತೆ
    ತನ್ನ ಉಸಿರ ಹಂಚಿಕೊಂಡು ಜೀವ ನೀಡಿದ ತಾಯಿ
    ತಿದ್ದಿ ತೀಡಿ ಬದುಕು ರೂಪಿಸಿದ ಮಾತೆ
    ಅಮ್ಮ, ನನ್ನ ಪಾಲಿಗೆ ಪ್ರತಿದಿನವೂ ನಿನ್ನದೇ ದಿನ

Thayandira Dina Messages in Kannada to Share on WhatsApp | ವಾಟ್ಸಾಪ್ ಮೂಲಕ ಹಂಚಿಕೊಳ್ಳಲು ಅಮ್ಮಂದಿರ ದಿನದ ಶುಭಾಶಯಗಳ ಸಂದೇಶ

ಅಮ್ಮಂದಿರ ದಿನದ ಶುಭಾಶಯಗಳನ್ನು ನೀವು ವಾಟ್ಸಾಪ್ ಮೂಲಕ ಹೀಗೆ ವ್ಯಕ್ತಪಡಿಸಬಹುದು. Mother’s Day messages in Kannada to share on WhatsApp ಇವುಗಳನ್ನು ನೀವು ಎಲ್ಲೆಡೆ ಹಂಚಿಕೊಳ್ಳಬಹುದು. ನಿಮ್ಮ ಅಮ್ಮ ನಿಮಗೆಷ್ಟು ವಿಶಿಷ್ಟ ಎಂದು ಎಲ್ಲರಿಗು ಸಾರಿ ಸಾರಿ ಹೇಳಬಹುದು.

  • ಉಪ್ಪಿಗಿಂತ ರುಚಿಯಿಲ್ಲ
    ತಾಯಿಗಿಂತ ಬಂಧುವಿಲ್ಲ
    ಅಮ್ಮನ ಆಶೀರ್ವಾದಕ್ಕಿಂತ ಮಿಗಿಲಾದುದು ಇನ್ನೊಂದಿಲ್ಲ
  • ಅಮ್ಮ ಎಂದರೆ
    ಶಬ್ದಗಳಿಗೆ ನಿಲುಕದ
    ಭಾವನೆಗಳನ್ನು ಮೀರಿದ
    ಒಂದು ಅನುಭವ
  • ಜಗತ್ತಿನಲ್ಲಿ ಏನನ್ನಾದರೂ ನಾವು ಖರೀದಿಸಬಹುದು
    ಆದರೆ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ
    ಈ ಜಗತ್ತಿನಲ್ಲಿ ಖರೀದಿಸಲು ಸಾಧ್ಯವಿಲ್ಲದ ಏಕೈಕ ವಸ್ತು ಅದು ಅಮ್ಮನ ಪ್ರೀತಿ
  • ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು
    ಆದರೆ ಕೆಟ್ಟ ಅಮ್ಮಂದಿರು ಅನ್ನುವವರಿರುವುದಿಲ್ಲ
    ಎಲ್ಲಾ ಅಮ್ಮಂದಿರಿಗೆ ಅಮ್ಮಂದಿರ ದಿನದ ಶುಭಾಶಯಗಳು
  • ಸಾಟಿ ಇಲ್ಲದ ಪದ-ಭಾವ
    ವಿವರಣೆ ಬೇಡದ ಕಲ್ಪನೆ
    ಅಮ್ಮ ನಿನಗೆ ನೀನೆ ಸಾಟಿ
    ಅಮ್ಮಂದಿರ ದಿನದ ಶುಭಾಶಯ
  • ಈ ಜಗತ್ತಿನಲ್ಲಿ ಹಣವಿದ್ದವರೆಲ್ಲ ಶ್ರೀಮಂತರಲ್ಲ
    ಅಮ್ಮ ಜೊತೆಗಿದ್ದವರಿಗೆ ಸರಿ ಸಾಟಿ ಇನ್ಯಾರಿಲ್ಲ
  • “ಅಮ್ಮ”
    ಈ ಶಬ್ದ ಒಂದೇ ಸಾಕು..
    ಮನ-ಮನೆ ಬೆಳಗಿಸಲು!
    ಕ್ಷಣವೊಂದೇ ಸಾಕು;
    ಬದುಕಿಗೆ ಸಾರ್ಥಕತೆ ತರಲು
  • ಅಮ್ಮನಿಲ್ಲದ ಒಂದು ದಿನವನ್ನೂ
    ಊಹಿಸಲು ಅಸಾಧ್ಯ.
    ಹಾಗಾಗಿ ಪ್ರತಿದಿನವೂ ಅಮ್ಮನ ದಿನವೇ
    ಅಮ್ಮನ ದಿನ ಅಮ್ಮನಿಗೆ ಅವಳು ನಮಗಾಗಿ ಕೊಟ್ಟ ಎಲ್ಲಾ ಪ್ರೀತಿಗೆ
    ಶರಣು ಹೇಳಲೊಂದು ದಿನವಷ್ಟೇ
    ಅಮ್ಮ, ಐ ಲವ್ ಯು!

Mother’s Day wishes Kannada from daughter | ಮಗಳಿಂದ ಅಮ್ಮನಿಗೆ ಶುಭಾಶಯ

ಹೆಣ್ಣು ಮಕ್ಕಳಿಗೆ ಅಮ್ಮನೆಂದರೆ ಸ್ವಲ್ಪ ಜಾಸ್ತಿ ಇಷ್ಟ. ಅವರ ಭಾವನಾತ್ಮಕ ಬೆಸುಗೆ ಅಮ್ಮಂದಿರು. ಈ ದಿನದಂದು ಹೆಣ್ಣು ಮಕ್ಕಳು ತಮ್ಮ ಅಮ್ಮಂದಿರಿಗೆ Mother’s Day greetings in Kannada from daughter ಹೀಗೆ ನಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಬಹುದು.

  • ಅಮ್ಮನಂತೆ ಮಗಳು!
    ನಿನ್ನ ಮಗಳಾಗಿ ಹುಟ್ಟಿದ್ದಕ್ಕೆ ಥಾಂಕ್ಯೂ !
    ನಿನ್ನಂತಹ ಅಮ್ಮನನ್ನು ಕೊಟ್ಟದ್ದಕ್ಕೆ ಈ ಬದುಕಿಗೆ ನಾನು ಸದಾ ಕೃತಜ್ಞ
    ಹ್ಯಾಪಿ ಮದರ್ಸ್ ಡೇ, ನನ್ನ ಪ್ರೀತಿಯ ಅಮ್ಮ

  • ತವರೂರು!
    ಪ್ರತಿ ಹೆಣ್ಣಿನ ಬದುಕಿನ ಅಮೂಲ್ಯ ಸಂಪತ್ತು!
    ತನಗಾಗಿ ಸದಾ ಕಾಯುವ ತಾಯಿ: ಈ ಬದುಕಿನ ಅತಿ ದೊಡ್ಡ ಕೊಡುಗೆ
    ಅಮ್ಮ, ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು
  • ಪ್ರತಿ ಹೆಣ್ಣಿನೊಳಗೊಬ್ಬಳು ಅಮ್ಮ ಇರುತ್ತಾಳೆ
    ಆದರೆ ಅವರಾರು ಅಮ್ಮನಂತಾಗುವುದಿಲ್ಲ
    ಅಮ್ಮನಿಗೆ ಸರಿಸಾಟಿ ಅಮ್ಮನೇ
    ಹ್ಯಾಪಿ ಮದರ್ಸ್ ಡೇ, ಅಮ್ಮ
  • ತಾಯಿ
    ಪ್ರತಿ ಮಗಳ ಮೊದಲ ಹೀರೋಯಿನ್
    ಪ್ರತಿ ಮಗಳ ಮೊದಲ ಆದರ್ಶ
    ಅಮ್ಮನಾಗುವ ಮಗಳ ಪಾಲಿನ ಮಾರ್ಗದರ್ಶಿ
  • ಅಮ್ಮ, ನೀನೆ ನನ್ನ ಭಾವ -ಬದುಕು
    ನೀನಿತ್ತ ಹೆಜ್ಜೆಯೇ ನನ್ನ ಆದರ್ಶ
    ಅಮ್ಮಂದಿರ ದಿನದ ಶುಭಾಶಯ
  • ಅಮ್ಮ
    ನನ್ನ ಬದುಕ ಗುರು ಮತ್ತು ಗುರಿ
    ನೀನಿಟ್ಟ ಹೆಜ್ಜೆಯೇ ನನ್ನ ಆದರ್ಶ
  • ದಾರದಂತೆ ಸೀರೆ
    ಅಮ್ಮನಂತೆ ಮಗಳು
    ನಿನ್ನಂತಹ ಅಮ್ಮನನ್ನು ಪಡೆದದ್ದು
    ನನ್ನ ಪೂರ್ವ ಜನ್ಮದ ಸುಕೃತ
    ಸದಾ ನೀವು ಖುಷಿಯಾಗಿರಿ
    ಅಮ್ಮಂದಿರ ದಿನದ ಶುಭಾಶಯಗಳು
  • ಅಮ್ಮನಿಲ್ಲದ ಪ್ರತಿಕ್ಷಣವೂ ಒಂದು ಯುಗದಂತೆ
    ಅಮ್ಮನಿಲ್ಲದ ಬದುಕು, ತಾಯ್ತನ ಸಿಗುವವರೆಗೆ ಬರಿ ಬರಡು
    ಅಮ್ಮನ ಸೆರಗಿನ ಸುಖ ಭಾವ, ಜಗತ್ತಿನ ಅತಿ ದೊಡ್ಡ ಸಂತೋಷ
    ಅಮ್ಮ, ಐ ಲವ್ ಯು
    ಹ್ಯಾಪಿ ಮದರ್ಸ್ ಡೇ

Read More,

10 Unique Mother’s Day Gift Ideas for Mom Under 500 Rs

Top 10 Mother’s Day Gift Ideas under ₹1000

Top 08 Best Mother’s Day Gifts for New Moms

10 Best Mother’s Day Flowers to Show Your Love

You Might Also Like

No Comments

Leave a Reply

IGP: Same Day Gift Delivery | Online Gifts Shop

error

Enjoy this blog? Please spread the word :)

Pinterest
LinkedIn
Share
WhatsApp