2025 ಹೊಸ ವರ್ಷದ ಶುಭಾಶಯಗಳು, ಕನ್ನಡದಲ್ಲಿ ಸಂದೇಶಗಳು | 2025 Happy New Year Wishes, Messages in Kannada
ಹೊಸ ವರುಷ 2025ನ್ನು ಸ್ವಾಗತಿಸುವ ಸಮಯವಿದು. ಹೊಸ ವರ್ಷ ಹೊಸತನಕ್ಕೆ ಮುನ್ನುಡಿ ಬರೆಯಲಿ… ಎಲ್ಲರ ಬದುಕಲ್ಲೂ ಅವರ ಕನಸಿನ ಬದಲಾವಣೆಗಳಿಗೆ ಈ ವರ್ಷ ಸಾಕ್ಷಿಯಾಗಲಿ ಅನ್ನುವ ಹಾರೈಕೆ ಎಲ್ಲರದ್ದು. ಈ ವರ್ಷ ಎಲ್ಲರ ಬದುಕು ಬಂಗಾರವಾಗಲಿ… ಶಾಂತಿ ನೆಮ್ಮದಿಯ ವರುಷವಾಗಲಿ ಅನ್ನುವುದು ಎಲ್ಲರ ಹೆಬ್ಬಯಕೆ-ಹಾರೈಕೆ ಕೂಡಾ .
ಹೊಸ ವರ್ಷವೆಂದರೆ ಅದು ಬರಿ ಒಂದು ಹೊಸ ಕ್ಯಾಲೆಂಡರ್ ಬದಲಾವಣೆ ಅಲ್ಲ. ನಮ್ಮ ಬದುಕಿನ ಹೊಸ ನಿರ್ಣಯ ತೆಗೆದುಕೊಳ್ಳಲೊಂದು ಸುಸಮಯ.
ಕರ್ನಾಟಕದ ಎಲ್ಲೆಡೆ ಹೊಸ ವರುಷವನ್ನು ವಿಜೃಂಭಣೆಯಿಂದ ಎದುರುಗೊಳ್ಳಲಾಗುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಹೊಸ ವರ್ಷವನ್ನು ಬಹಳ ಭರ್ಜರಿಯಾಗಿಯೇ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿಯೋರ್ವರೂ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಹಾಡು, ಕುಣಿತದೊಂದಿಗೆ ಹೊಸ ವರ್ಷವನ್ನು ಸಂಭ್ರಮಿಸುತ್ತಾರೆ.
ಹೊಸ ವರ್ಷವೆಂದರೆ ಅದು ನಮ್ಮ ಹಳೆಯ ನೋವುಗಳನ್ನು ಮರೆಯಲು, ಹೊಸತನ್ನು ಸಂಭ್ರಮಿಸಲು ಕಾರಣ. ಇದು ನಮ್ಮ ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ, ಹಾಗು ಇತರರಿಗೆ ಸಂದೇಶಗಳನ್ನು ಕಳುಹಿಸಿ, ನಮ್ಮ ಸಂಬಂಧಗಳನ್ನು ನೆನಪಿಸಲು ಇರುವ ಉತ್ತಮ ಅವಕಾಶ. ನಮ್ಮ ನಡುವಿನ ಎಲ್ಲಾ ವೈಮನಸ್ಸುಗಳನ್ನು ದೂರ ಮಾಡಿ, ಹೊಸ ಸಂಬಂಧದ ಬೆಸುಗೆ ರೂಪಿಸಲು ಅತ್ಯುತ್ತಮ ಸಮಯ. ಶುಭ ನುಡಿದು, ಅವರ ಮನಸ್ಸು ಗೆಲ್ಲಲು ಇರುವ ಅವಕಾಶ. ಆ ಮೂಲಕ ಹೊಸ ವರ್ಷವನ್ನು ನಾವು ಸಾರ್ಥಕವಾಗಿ ಎದುರುಗೊಳ್ಳಬಹುದು.
Our Top Gift Picks
Gifts for Every Occasion
ಕನ್ನಡದಲ್ಲಿ ಹೊಸ ವರ್ಷದ ಶುಭಾಶಯಗಳು/ಸಂದೇಶಗಳು 2025 – Happy New Year Wishes/Messages in Kannada 2025
ಹೊಸ ವರ್ಷದ ಶುಭಾಶಯಗಳ ಕುರಿತ ಕನ್ನಡ ಸಂದೇಶಗಳು ನೂರಾರು. ಅದನ್ನು ನೀವು ಹೀಗೆ ವಿನಿಮಯ ಮಾಡಿಕೊಳ್ಳಬಹುದು.
- ಹೊಸ ವರ್ಷ: ತರಲಿ ಎಲ್ಲರ ಬಾಳಿನಲ್ಲಿ ಹರುಷ. ಹೊಸತನ ಎಲ್ಲರ ಬದುಕಿನಲ್ಲಿಯೂ ಮೂಡಲಿ.
- ಹಳೆ ವರುಷದ ನೆನಪು: ಹೊಸ ವರುಷದ ಕನಸು: ಆಗಲಿ ಸುಂದರ ಎಲ್ಲರ ಬದುಕು. ಹೊಸ ವರ್ಷದ ಶುಭಾಶಯಗಳು
- ಪಶ್ಚಿಮದಿ ಸೂರ್ಯ ಮುಳುಗಿದಂತೆ, ನಿಮ್ಮ ನೋವುಗಳೆಲ್ಲಾ ಮರೆಯಾಗಲಿ… ಹೊಸ ವರುಷದ ಸೂರ್ಯೋದಯದಂತೆ ಹೊಸ ಭರವಸೆಗಳ ಬೆಳಕು ಚೆಲ್ಲಲಿ.. ಹೊಸ ವರುಷದ ಶುಭಾಶಯಗಳು
- ಹೊಸ ವರುಷವೆಂದರೆ ಹೊಸ ಕ್ಯಾಲೆಂಡರ್: ಹೊಸ ವರುಷವೆಂದರೆ ಹೊಸ ಹೊಸ ಯೋಜನೆಗಳು: ಈ ವರ್ಷ ನನಸಾಗಲಿ ನಿಮ್ಮೆಲ್ಲರ ಕನಸುಗಳು
- ಹೊಸ ವರ್ಷದ ಈ ಸುಸಂದರ್ಭದಲ್ಲಿ ಹಳೆಯ ಕಹಿಗಳನ್ನು ಮರೆಯೋಣ: ಸಿಹಿ ಭಾವನೆಗಳೊಂದಿಗೆ ಹೊಸ ಪಯಣ ಆರಂಭಿಸೋಣ.
- 2024 ಮುಗಿದಿದೆ… 2025 ಆರಂಭವಾಗಿದೆ. ನಮ್ಮಲ್ಲೂ ಇದು ಹೊಸತನದ ಭಾವ-ಭಾವನೆಗಳು ಜಿನುಗಲಿ
- ಜೊತೆ ಜೊತೆಯಾಗಿ ಎಲ್ಲರೊಡನೆ ಸೇರಿ ಹೊಸ ವರುಷವನ್ನು ಸಂಭ್ರಮಿಸೋಣ… ಜೊತೆ ಜೊತೆಯಾಗಿ ಯಶಸ್ಸಿನತ್ತ ಹೆಜ್ಜೆ ಹಾಕೋಣ
- ಹೊಸ ವರ್ಷ: ಹೊಸ ಕನಸು: ಹೊಸ ವರ್ಷ: ಹೊಸ ನಿರ್ಧಾರ. ನಿಮ್ಮೆಲ್ಲರ ಕನಸು -ನಿರ್ಧಾರಗಳಿಗೆ ಈ ವರ್ಷ ನಾಂದಿ ಹಾಡಲಿ.
- ಹಳೆ ಬೇರು ಹೊಸ ಚಿಗುರು: ಹೊಸ ವರ್ಷ ಹೊಸ ಸಂಕಲ್ಪ. ಈ ವರ್ಷ ನಿಮ್ಮ ಸಂಕಲ್ಪಗಳು ಸಿದ್ಧಿಸಲಿ.
- ಹೊಸ ವರ್ಷ 2025 ಇಲ್ಲಿದೆ. ನಿಮ್ಮ ಕನಸುಗಳನ್ನು ನನಸಾಗಿಸಲು ನೂರಾರು ದಿನಗಳಿವೆ. ಕಹಿ ನೆನಪು ಮರೆತು, ಸಿಹಿ ಕನಸು ಹೊತ್ತು ಹೊಸ ವರ್ಷವನ್ನು ಸ್ವಾಗತಿಸೋಣ
ಕನ್ನಡದಲ್ಲಿ ಟಾಪ್ 10 ಹೊಸ ವರ್ಷದ ಶುಭಾಶಯಗಳು – Top 10 New Year Wishes in Kannada
ಹೊಸ ವರ್ಷದಂದು ಕುಟುಂಬ ಸದಸ್ಯರಿಗೆ ಆತ್ಮೀಯ ಸಂದೇಶವನ್ನು ಕಳುಹಿಸುವ ಮೂಲಕ ಅವರ ದಿನ- ವರ್ಷವನ್ನು ನೀವು ಸುಂದರವಾಗಿಸಬಹುದು. ಅದಕ್ಕಾಗಿ ಸುಂದರ ಹೊಸ ವರ್ಷದ ಸಂದೇಶಗಳು ಇಲ್ಲಿವೆ.
- ಹೊಸ ವರ್ಷ ನಮ್ಮೆಲ್ಲ ಕುಟುಂಬ ಸದಸ್ಯರಿಗೆ ನೆಮ್ಮದಿ- ಸಂತೃಪ್ತಿ ತರಲಿ. ನೆಮ್ಮದಿಯ ಬದುಕನ್ನು ಆ ದೇವ ಕರುಣಿಸಲಿ
- ಹೊಸ ವರ್ಷ ಅಂದರೆ ಹೊಸ ಕ್ಯಾಲೆಂಡರ್ ಮಾತ್ರ ಅಲ್ಲ… ನಮ್ಮ ಭಾವನೆಗಳನ್ನು ಇನ್ನಷ್ಟು ಹೊಸದಾಗಿಸುವ ಸಮಯ. ನಮ್ಮೆಲ್ಲರ ಸಂಬಂಧ ಹೊಸತರಂತೆ ಮಿನುಗಲಿ.
- ಕುಟುಂಬವೆಂದರೆ ಬರಿ ಜೀವಗಳಲ್ಲ; ಆ ಜೀವಗಳೊಳಗಿರುವ ಭಾವನೆಗಳು ಕೂಡಾ. ಹೊಸ ವರ್ಷದಲ್ಲಿ ಆ ಭಾವನೆಗಳೆಲ್ಲಾ ಗಾಳಿಪಟದಂತೆ ಆಗಸದೆತ್ತರ ಹಾರಲಿ.. ವಿಹರಿಸಲಿ
- ಹೊಸ ವರ್ಷ ನಮ್ಮ ಕುಟುಂಬದಲ್ಲಿ ನಾನಾ ಹೊಸತನಕ್ಕೆ ನಾಂದಿ ಹಾಡಲಿ. ಎಲ್ಲರ ಬದುಕು ಸಮಂಗಲವಾಗಲಿ
- ಕುಟುಂಬವೇ ಎಲ್ಲರ ಶಕ್ತಿ. ಈ ಶಕ್ತಿ ಹೊಸ ವರ್ಷದಲ್ಲಿ ಇನ್ನಷ್ಟು ಗಟ್ಟಿಯಾಗಲಿ. ಮನೆ-ಮನಗಳೆಲ್ಲಾ ಬೆಳಗಲಿ.
- ಹೊಸ ವರ್ಷದ ನೆಪ: ಏಕತೆಯ ಜಪ; ನಮ್ಮೆಲ್ಲರ ಕುಟುಂಬ ಸದಸ್ಯರಿಗೆ ಸಿಗಲಿ ಈ ವರ್ಷ ಜಯ.
- ಕುಟುಂಬದ ಕಷ್ಟ ಕಾರ್ಪಣ್ಯಗಳು ಈ ಹೊಸ ವರ್ಷ ಮರೆಯಾಗಲಿ; ಸಿಹಿ ಕನಸುಗಳು ನನಸಾಗಲಿ. ಕೌಟುಂಬಿಕ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ.
- ಕುಟುಂಬವೇ ನಮ್ಮ ಶಕ್ತಿ. ಸೇರೋಣ ಹೊಸ ವರ್ಷದ ಆಚರಣೆಗೆ ಜೊತೆಯಾಗಿ. ಎಲ್ಲರ ಕನಸುಗಳೆಲ್ಲಾ ನನಸಾಗಲಿ ಇನ್ನೊಂದು ಕ್ಯಾಲೆಂಡರ್ ಬರುವ ಮೊದಲು.
- ಹೊಸ ವರ್ಷದ ಮೊದಲ ಸೂರ್ಯೋದಯದ ಸಂದರ್ಭಲ್ಲಿ ಸೂರ್ಯನ ಎಳೆ ಬಿಸಿಲಿಗೆ ಮಂಜು ಕರಗುವಂತೆ ನಮ್ಮ್ಮೆಲ್ಲರ ಕಷ್ಟಗಳು ಹೊಸ ವರ್ಷದಲ್ಲಿ ಮರೆಯಾಗಲಿ.
- ಈ ವರ್ಷ ನಮ್ಮ ಕೌಟುಂಬಿಕ ಬಾಂಧವ್ಯಗಳು ಇನ್ನಷ್ಟು ಗಟ್ಟಿಯಾಗಲಿ. ಹೊಸ ವರ್ಷ ಕುಟುಂಬದಲ್ಲಿ ಹೊಸತನವನ್ನು ತರಲಿ.
ಕನ್ನಡದಲ್ಲಿ ಕುಟುಂಬ/ಸ್ನೇಹಿತರಿಗೆ ಹೊಸ ವರ್ಷದ ಸಂದೇಶಗಳು – New Year Messages for Family/Friends in Kannada
ಹೊಸ ವರ್ಷವೆಂದರೆ ಅದು ಸ್ನೇಹಿತರೊಂದಿಗೆ ಮಸ್ತ್ ಮಜಾ ಮಾಡುವ ಸಮಯ. ಅಂದು ನೀವು ಹೊಸ ವರ್ಷದ ಸಂದೇಶ ವಿನಿಮಯಮಾಡಿಕೊಂಡು ನಿಮ್ಮ ಸ್ನೇಹವನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳಬಹುದು. ಅದಕ್ಕಾಗಿ ಇಲ್ಲಿದೆ ನವಿರು ನವಿರು ಭಾವನೆ ಹೊತ್ತ ಸ್ನೇಹದ ಸಂದೇಶಗಳು
- ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ, ನಮ್ಮ ಸ್ನೇಹದಲ್ಲಿ ಹೊಸ ಹೊಸತನ ಬರಲಿ. ಹೊಸ ವರ್ಷದ ಸಂಭ್ರಮಾಚರಣೆ ಇಡೀ ವರ್ಷ ಉಳಿಯಲಿ.
- ಹೊಸತನವೇ ಸ್ನೇಹದ ಅಡಿಪಾಯ. ಅದು ಇನ್ನಷ್ಟು ಗಟ್ಟಿಯಾಗಲಿ ಈ ಹೊಸ
- ವರ್ಷ.
- ಹೊಸ ವರ್ಷವೆಂದರೆ ಅದು ಮಸ್ತ್ ಮಜಾ ಆಚರಣೆ. ಇಡೀ ವರ್ಷ ಇದರ ಸಿಹಿ ನೆನಪಿನೊಂದಿಗೆ ಬದುಕೋಣ
- ಹೊಸ ವರ್ಷ ನಮ್ಮ ಸ್ನೇಹ ಹೊಸ ಎತ್ತರಕ್ಕೆ ಏರಲಿ. ಅದಕ್ಕೆ ಶಕ್ತಿ ನೀಡೆಂದು ಆ ಭಾವಂತನಲ್ಲಿ ಪ್ರಾರ್ಥಿಸಲು ಇದು ಸುಸಮಯ.
- ಹೊಸ ವರ್ಷ ಬರುವಿಕೆಯನ್ನು ಆಚರಿಸುತ್ತಾ, ನಮ್ಮ ಸ್ನೇಹದ ಸೇತುವೆಯಲ್ಲೊಂದು ಸಿಂಹಾವಲೋಕನ ಮಾಡೋಣ. ಕಹಿ ನೆನಪು ಮರೆತು, ಸಿಹಿ ನೆನಪಿನೊಂದಿಗೆ ಹೊಸ ವರ್ಷಕ್ಕೆ ಕಾಲಿಡೋಣ.
- ಹೊಸ ವರ್ಷ ಹೊಸ ಸಂಕಲ್ಪ; ನಮ್ಮ ಕನಸುಗಳನ್ನು ನನಸಾಗಿಸಲು ಜೊತೆಯಾಗಿ ಸಾಗೋಣ.
- ಹೊಸ ವರ್ಷದ ದಿನ ಸಂಕಲ್ಪ ಮಾಡೋಣ : ನಮ್ಮ ಗೆಳೆತನವನ್ನು ಅಮರಗೊಳಿಸೋಣ. ನಮ್ಮ ಸ್ನೇಹದ ಶ್ರೇಷ್ಠತೆ ಎಲ್ಲರಿಗೂ ಮಾದರಿಯಾಗಿಸೋಣ.
- ಹೊಸ ವರ್ಷದಂದು ಸಿಡಿಸುವ ಪಟಾಕಿ ಸದ್ದಿನಂತೆ ನಮ್ಮ ಸ್ನೇಹ ಕೂಡಾ ಸದಾ ಪ್ರಜ್ವಲಿಸಲಿ. ಹೊಸ ಎತ್ತರಕ್ಕೆ ಜೊತೆಯಾಗಿ ಸಾಗೋಣ- ಬೆಳೆಯೋಣ. ನಮ್ಮ ಸ್ನೇಹದ ಸಡ್ಡು ಎಲ್ಲೆಡೆ ಎಲ್ಲರಿಗೂ ಕೇಳಿಸಲಿ ಎಂದು ಹಾರೈಸೋಣ.
- ಕಳೆದ ವರ್ಷದ ಕಹಿಯನ್ನು ಮರೆಯೋಣ.. ಹೊಸ ವರ್ಷ ಎಲ್ಲವೂ ಸಿಹಿಯಾಗಿರಲಿ ಎಂದು ಪ್ರಾರ್ಥಿಸೋಣ.. ಪಾರ್ಥನೆಗಿದೆ ಅದ್ಭುತ ಶಕ್ತಿ ಅನ್ನುವುದನ್ನು ನಾವು ಮರೆಯದಿರೋಣ.
ಹೊಸ ವರ್ಷದ ಮಧ್ಯರಾತ್ರಿಯ ಕಗ್ಗತ್ತಲಿನಲ್ಲಿ ಹೊಳೆಯಲಿ ನಮ್ಮ ಸ್ನೇಹದ ದೀಪ. ಅದಕ್ಕೆ ಎರೆಯೋಣ ಪ್ರೀತಿಯ ತೈಲ ಇಡೀ ವರುಷ. ನಮ್ಮೆಲ್ಲರ ಬಾಳನ್ನು ಅದು ಬೆಳಗಲಿ ಅದು ಇಡೀ ವರ್ಷ.
ವಿಶ್ವವೇ ಇಂದು ಹೊಸ ವರ್ಷವನ್ನು ಆಚರಿಸಿಕೊಳ್ಳುತ್ತಿದೆ. ನಮ್ಮ ಬದುಕನ್ನು ಸಂಭ್ರಮಿಸಲು ಇಂದು ಹೊಸ ಒಂದು ಕಾರಣ. ಇಂದು ನಾವೆಲ್ಲರೂ ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೊರೋಣ. ನಮ್ಮ ಹೊಸ ವರ್ಷದ ಶುಭಾಶಯದ ಸಂದೇಶಗಳು ಅವರ ಮನ ಸೂರೆಗೊಳ್ಳಲಿ. ಇಂದಿನಿಂದ ನಮ್ಮೆಲ್ಲರ ಬದುಕಿನಲ್ಲಿ ಹೊಸ ಶಕೆ ಮೂಡಲಿ
No Comments